ಯಲ್ಲಾಪುರ : ಎಲ್ಲಾ ವೃತ್ತಿಯಲ್ಲಿರುವರಿಗೆ ಒಂದು ಕಲೆ ಇರುತ್ತದೆ ಕನಸು ಇರುತ್ತದೆ. ಮೆಕ್ಯಾನಿಕ್ ಓರ್ವ ಕೇವಲ ದುರಸ್ಥಿಯನ್ನಷ್ಟೆ ಮಾಡಬೇಕೆಂದು ಆತ ತನ್ನದೆ ಆದ ಕಲ್ಪನೆಗೆ ರೂಪ ಕೊಡಲು ಪ್ರಾರಂಬಿಸಿದರೆ ಅದೇ ಒಂದು ಹೊಸ ಆಕರ್ಷಕ ವಸ್ತುವಾಗಿ ರೂಪುಗೊಳ್ಳುತ್ತದೆ. ಅಂತಹ ಕಲ್ಪನೆಗೆ ರೂಪು ಕೊಟ್ಟವರು ಇಲ್ಲಿಯ ಗ್ಯಾರೆಜ್ ಒಂದರಲ್ಲಿ ಮೆಕ್ಯಾನಿಕ್ ಆಗಿರುವ 25 ವರ್ಷದ ಶೇಖ ಅಹಮ್ಮದ ಶೇಖ ಇಸ್ಮಾಯಿಲ್…
ಗುಜರಿಯಲ್ಲಿ ಕರಗಲು ತೆರಳಬೇಕಾದ ವಸ್ತುಗಳು ಇವರ ಕಲ್ಪನೆಯಲ್ಲಿ ಆಕಾರ ಪಡೆದು ಸಣ್ಣ ಚಲಿಸುವ ಬೈಕ್ ಆಗಿ ಮಾರ್ಪಟ್ಟಿದೆ. ಪಟ್ಟಣ ವ್ಯಾಪ್ತಿಯ ತಟಗಾರ ಕ್ರಾಸ್ ಬಳಿ ಗ್ಯಾರೇಜ ಒಂದರಲ್ಲಿ ಕೆಲಸ ಮಾಡುತ್ತಿರುವ ಶೇಖ ಮಹಮ್ಮದನಿಗೆ ಗ್ಯಾರೇಜಿನ ಮೂಲೆಯಲ್ಲಿ ಪ್ರಯೋಜನಕ್ಕೆ ಬಾರದ ಬಜಾಜ ಸನ್ನಿ ದ್ವಿಚಕ್ರ ವಾಹನದ ಇಂಜಿನನನ್ನು ಬಳಸಿಕೊಂಡು ಮಕ್ಕಳು ಓಡಿಸುವ ಬೈಕ್ ನಿರ್ಮಿಸಬೇಕಂಬ ಬಯಕೆ ಬಂತು, ಈ ಚಿಕ್ಕ ಬೈಕನ್ನು 10-12 ವರ್ಷದವರು ಓಡಿಸುವಂತಿರಬೇಕು, ವೆಚ್ಚವು
ಕಡಿಮೆಯಾಗಿರಬೇಕು ಅಂತಹ ಆಕರ್ಷಕವಾದ ಬೈಕಿನ ಕಲ್ಪನೆಯೊಂದಿಗೆ ಬಿಡ ಭಾಗಗಳನ್ನು ಜೋಡಿಸಲು ಗ್ಯಾರೇಜ್ ಮಾಲಿಕ ಅಬ್ದುಲ್ ಮೇಸ್ತ್ರಿ ಹಾಗೂ ಲೇತ್ ಮೇಸ್ತ್ರೀ ನಾಗರಾಜ ಮೂದಲಿಯಾರ ಹಾಗೂ ಸಹ ಕೆಲಸಗಾರರ ಅನುಭವ ಈತನ ಸಹಾಯಕ್ಕೆ ಬಂದಿತು.
ಶೇಖ ಮಹಮ್ಮದ ಕೇವಲ 15 ದಿನಗಳಲ್ಲಿ ಗುಜರಿಯಲ್ಲಿ ಸಿಕ್ಕ ವಸ್ತುಗಳನ್ನು ಸಂಗ್ರಹಿಸಿ ಸಣ್ಣ ಬೈಕ್ ನಿರ್ಮಿಸಿ ಯಲ್ಲಾಪುರ ಬೀದಿಗಳಲ್ಲಿ ಓಡಿಸಿ ಸಾರ್ವಜನಿಕರ ಕುತೂಹಲದ ಕೇಂದ್ರವಾದ. ಪ್ರಯೋಜನಕ್ಕೆ ಬಾರದ ಹಳೆಯ ಇಂಜಿನ ಬಳಸಿ ಎರಡು ಮೂರು ಬೇರೆ ಬೇರೆ ಕಂಪನಿಗಳ ಬೈಕ್‌ಗಳ ಬಿಡಿ ಭಾಗಗಳನ್ನು ಜೋಡಿಸಿ ಸೈಕಲ್ ಓಡಿಸುವ ಮಕ್ಕಳಿಗಾಗಿ ಮಿನಿ ಬೈಕ್ ನಿರ್ಮಿಸಿರುವ ಶೇಖ ಮಹಮ್ಮದನಿಗೆ ಮುಂದೆ ಇಂತಹುದೆ ನಾಲ್ಕು ಚಕ್ರದ ಮಕ್ಕಳ ಕಾರು ನಿರ್ಮಿಸಬೇಕೆಂಬ
ಆಸೆಯಿದೆ. ಆತನ ತಲೆಯಲ್ಲಿ ಈಗಾಗಲೆ ಕಾರಿನ ಚಿತ್ರಣ ನಕ್ಷೆ ಸಿದ್ದವಾಗುತ್ತಿದೆ. ಭವಿಷ್ಯದಲ್ಲಿ ಶೇಖ ಮಹಮ್ಮದ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆ ನಮ್ಮದು.http://vknewz.com/
please comment below or email me

No comments:
Post a Comment